ನಮಸ್ತೆ ಹೇಗಿದೀರಾ? ಆರಾಮ?
ಬನ್ನಿ, ಮಸ್ತಕ ಮಣಿಯ ಲೋಕಕ್ಕೆ ಹಾರ್ದಿಕ ಸ್ವಾಗತ.
ಮಸ್ತಕ ಮಣಿ ಒಂದು ವೈಶಿಷ್ಟ್ಯ ದೃಷ್ಟಿಕೋನದಿಂದ ಕನ್ನಡದಲ್ಲಿ ಉಪಯುಕ್ತ ಮಾಹಿತಿ, ಮನೋರಂಜನೆ, ಚಿಂತನೆ ನೀಡುವ ಗುರಿ ಹೊಂದಿದೆ. ಇದು ಸರ್ವೇ ಸಾಧಾರಣ ಮಣಿಯಲ್ಲ ಮಸ್ತಕ ಮಣಿ!
ಮಸ್ತಕ ಮಣಿ ತಾಣ ಹಲವು ತಾಣಗಳ ಸಮೂಹ ಆಗಿರಲಿದ್ದು ಗುರಿ ಮಾತ್ರ ಕನ್ನಡದಲ್ಲಿ ಅರಿವಿನ ಪ್ರಸರಣೆ. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರಿಗೂ ಸೂಕ್ತ ವಿಷಯ ಇಲ್ಲಿರಲಿದೆ.
ಮಸ್ತಕ ಎಂದರೆ ತಲೆ ಅಥವಾ ಯಾವುದೇ ವಸ್ತುವಿನ ಮೇಲ್ಭಾಗ ಎಂಬ ಅರ್ಥವಿದೆ. ಮಣಿ ಎಂದರೆ ಆಭರಣ, ಅತ್ಯಮೂಲ್ಯ ಶಿಲೆ, ಹರಳು, ರತ್ನ ಎಂಬರ್ಥ. ಮಸ್ತಕ ಮಣಿ ಎಂದರೆ ತಲೆಯ ಅಲಂಕರಿಸುವ ಅತ್ಯಮೂಲ್ಯ ಶಿಲೆ ಎಂದು ಅರ್ಥೈಸಬಹುದು.
ಉಪಯುಕ್ತ ಜ್ಞಾನವನ್ನು ಕನ್ನಡದಲ್ಲಿ ಪಸರಿಸುತ್ತಾ ಕನ್ನಡಿಗರ ಮನಸ್ಸಲ್ಲಿ ಬೆಲೆ ಕಟ್ಟಲಾಗದ ಆಭರಣದಂತೆ ರಾರಾಜಿಸಬೇಕು ಅನ್ನುವದೇ ಮಸ್ತಕ ಮಣಿಯ ಹೆಗ್ಗುರಿ.
ದೇಶ, ವಿದೇಶ, ವಿಜ್ಞಾನ, ವೈದ್ಯಕೀಯ, ಹಣಕಾಸು, ಸಂಸ್ಕೃತಿ, ಆಧ್ಯಾತ್ಮ ಹೀಗೆ ಹಲವು ವಿಷಯಗಳನ್ನು ಕನ್ನಡದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಹೇಳುವದೇ ಈ ಮಸ್ತಕ ಮಣಿಯ ಗುರಿ ಆಗಿರಲಿದೆ.
ಇಲ್ಲಿನ ಪ್ರತಿ ಪುಟ ಉಪಯುಕ್ತ ಮಾಹಿತಿ ನೀಡುವ ಗುರಿ ಹೊಂದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ